೧೭೬೮-೧೮೨೨. ಸ್ವಿಟ್ಜರ್ಲೆಂಡಿನಲ್ಲಿ ಜನಿಸಿದ ಗಣಿತವಿಜ್ಞಾನಿ. ಮಿಶ್ರ ಸಂಖ್ಯೆಗಳ (ಕಾಂಪ್ಲೆಕ್ಸ್ ನಂಬರ್ಸ್) ಮೇಲಿನ ಇವನ ಪ್ರೌಢ ಲೇಖನ (೧೮೦೬) ಇವನಿಗೆ ಖ್ಯಾತಿಯನ್ನು ತಂದುಕೊಟ್ಟಿತು. ಎಲ್ಲ ಬೀಜಗಣಿತೀಯ ಸಮೀಕರಣಗಳೂ ಮೂಲವನ್ನು (ರೂಟ್ಸ್) ಹೊಂದಿವೆ ಎಂಬುದನ್ನು ತೋರಿಸಲು ಮಿಶ್ರಸಂಖ್ಯೆಗಳನ್ನು ಈತ ಮೊಟ್ಟಮೊದಲಿಗೆ ಬಳಸಿಕೊಂಡ. ಈ ಸಂಖ್ಯೆಯನ್ನು ನಿರ್ದೇಶಿಸಲು ಆರ್ಗಾಂಡ್ ಚಿತ್ರ ಬಲು ಸಹಾಯಕಾರಿ. ಈತ ಪ್ಯಾರಿಸ್ನಲ್ಲಿ ನಿಧನನಾದ. ಮಿಶ್ರ ಸಂಖ್ಯೆಗಳು

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ